ಕಂಪ್ಲಿ: ತುಂಗಭದ್ರಾ ನೀರಿಗಾಗಿ ರೈತರ ಪಾದಯಾತ್ರೆ : ಇಂದು ಕಂಪ್ಲಿಗೆ ತಲುಪಿದ ಹೋರಾಟ
Kampli, Ballari | Nov 16, 2025 ಸಿರುಗುಪ್ಪ ತಾಲೂಕಿನ ಕರೂರಿನಿಂದ ಟಿಬಿ ಡ್ಯಾಂವರೆಗೆ ತುಂಗಭದ್ರಾ ನೀರಿಗಾಗಿ ರೈತರು ನಡೆಸುತ್ತಿರುವ ಪಾದಯಾತ್ರೆ ಇಂದು ಕಂಪ್ಲಿಗೆ ತಲುಪಿದೆ. ತುಂಗಭದ್ರಾ ಜಲಾಶಯ ವ್ಯಾಪ್ತಿಯ ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ರೈತರಿಗೆ ಬೇಸಿಗೆ ಬೆಳೆ ಬೆಳೆಸಲು ನೀರು ಪೂರೈಕೆ ಮಾಡಬೇಕು ಎಂಬ ಒತ್ತಾಯದೊಂದಿಗೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸಂಘಟನೆಗಳ ಸಹಯೋಗದಲ್ಲಿ ಪಾದಯಾತ್ರೆ ನಾಲ್ಕು ದಿನಗಳ ಹಿಂದೆ ಆರಂಭವಾಗಿತ್ತು. ನ.16,ಭಾನುವಾರ ಬೆಳಿಗ್ಗೆ 9:30ಕ್ಕೆ ಪಾದಯಾತ್ರೆ ಕಂಪ್ಲಿಗೆ ತಲುಪುತ್ತಿದ್ದಂತೆ ರೈತರು ಜಾಥಾ ರೂಪದಲ್ಲಿ ನಗರದ ಮೂಲಕ ಸಂಚರಿಸಿದರು. ನಂತರ ಟಿಬಿ ಡ್ಯಾಂ ಹತ್ತಿರ ಇರುವ ತುಂಗಭದ್ರಾ ಮಂಡಳಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ.