ಸಾಲಿಗ್ರಾಮ: ಸಾಲಿಗ್ರಾಮ:ಗಂಡು ಮಗು ಹೆತ್ತಿಲ್ಲವೆಂದು ವರದಕ್ಷಿಣೆ ನೆಪದಲ್ಲಿ ಪತ್ನಿಗೆ ಟಾರ್ಚರ್
ಮೈಸೂರು:ಗಂಡು ಮಗು ಹೆತ್ತಿಲ್ಲವೆಂದು ವರದಕ್ಷಿಣೆ ನೆಪವೊಡ್ಡಿ ಪತಿರಾಯ ಪತ್ನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಸಾಲಿಗ್ರಾಮ ತಾಲೂಕು ದಡದಹಳ್ಳಿ ಗ್ರಾಮದಲ್ಲಿ ನಡೆದಿದೆ.ಪತಿ ಕ್ರೂರತನಕ್ಕೆ ಗಾಯಗೊಂಡ ಪತ್ನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ವರದಕ್ಷಿಣೆ ಹಾಗೂ ಗಂಡುಮಗುವಿನ ವ್ಯಾಮೋಹಕ್ಕೆ ಒಳಗಾದ ಪತಿಯ ಹಿಂಸೆ ಭರಿಸಲು ಸಾಧ್ಯವಾಗದ ಪತ್ನಿ ನ್ಯಾಯಕ್ಕಾಗಿ ಸಾಲಿಗ್ರಾಮ ಪೊಲೀಸರ ಮೊರೆ ಹೋಗಿದ್ದಾರೆ.ಬೃಂದಾ(32) ಪತಿಯಿಂದ ಹಲ್ಲೆಗೆ ಒಳಗಾದ ಗೃಹಿಣಿ.ಹಲ್ಲೆ ನಡೆಸಿದ ಪತಿ ಬಸವರಾಜು,ಅತ್ತೆ ಕಾಳಮ್ಮ ಮತ್ತು ಮಾವ ಚೆಲುವಯ್ಯ ವಿರುದ್ದ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಬೃಂದಾ ದೂರು ದಾಖಲಿಸಿದ್ದಾರೆ.