ಸಿರವಾರ: ಕಲ್ಲೂರು : ತಿಪ್ಪೆ ಜಾಗದ ಅಂಗಡಿ ವಿಚಾರಕ್ಕೆ ಹೊಡೆದಾಟ ಸಿಸಿ ಕ್ಯಾಮೆರಾದಲ್ಲಿ ಸೆರೆ
ತಿಪ್ಪೆ ಜಾಗದಲ್ಲಿ ನಿರ್ಮಿಸಲಾದ ಅಂಗಡಿಗಾಗಿ ಹೊಡೆದಾಟವಾಗಿದ್ದು ಇಬ್ಬರ ಮಧ್ಯ ಮೂರನೆ ವ್ಯಕ್ತಿ ಬಂದು ಹಲ್ಲೆ ನಡೆಸಿ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ದಲಿತ ಸೇನೆ ಸಮಿತಿ ಮುಖಂಡರು ಸೇರಿ ಗ್ರಾಮ ಪಂಚಾಯತಿ ಸದಸ್ಯೆ ಲಲಿತ ಮತ್ತು ಕುಟುಂಬದ ಮೇಲೆ ಹಲ್ಲೆಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ತಿಪ್ಪೆ ಜಾಗದಲ್ಲಿ ಅಂಗಡಿ ಹಾಕಿಕೊಂಡಿದ್ದರು ಪಂಚಾಯತಿ ಸದಸ್ಯೆ ಲಿಲಿತಾ, ಈ ಜಾಗದ ವಿಚಾರದಲ್ಲಿ ಕುಟುಂಬಸ್ಥರ ಮಧ್ಯ ಜಗಳ ನಡೆದಿತ್ತು. ಜಗಳದ ಮಧ್ಯ ಪ್ರವೇಶಿಸಿದ ಗ್ರಾಮದ ಯೇಸು ರಾಜ್ ಮತ್ತು ಸಂಘಡಿಗರು ಹಲ್ಲೆ ಮಾಡಿದ ಆರೋಪಿಸಲಾಗುತ್ತಿದೆ.