ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಟೆಂಪೋವೊಂದು ಎರಡು ತುಂಡಾಗಿ ಆಗಿ ಬ್ರಿಡ್ಜ್ನಿಂದ ಕೆಳಗೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಜುಲೈ 5ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಜ್ಞಾನಭಾರತಿ ಬಳಿ ನೈಸ್ ರಸ್ತೆಯ ರಾಮಸಂದ್ರ ಬ್ರಿಡ್ಜ್ ಬಳಿ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯಾಡರಹಳ್ಳಿಯಿಂದ ಕೆಂಗೇರಿ ಕಡೆಗೆ ತೆರಳುತ್ತಿದ್ದ ಬೆಡ್ಶೀಟ್, ಕಾಟನ್ ತುಂಬಿದ್ದ ಟೆಂಪೋದ ಚಾಲಕ ರಾಘವೇಂದ್ರ ಅಜಾಗರೂಕತೆಯಿಂದ ಚಲಾಯಿಸಿದ್ದಾನೆ. ಇದರಿಂದ ರಸ್ತೆಯ ಬಲಭಾಗದ ವಿಭಜಕಕ್ಕೆ ಟೆಂಪೋ ಡಿಕ್ಕಿಯಾಗಿದೆ. ಈ ವೇಳೆ ಡ್ರೈವರ್ ಕ್ಯಾಬಿನ್ ತುಂಡಾಗಿ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಟೆಂಪೋ ಬಾಡಿ ರಸ್ತೆಯ ಮೇಲೆ ಉಳಿದುಕೊಂಡಿದೆ. ಪರಿಣಾಮ ಟೆಂಪೋ ಚಾಲಕ ಹಾಗೂ ಮತ್ತಿಬ್ಬರಿಗೆ ಗಾಯಗಳಾಗಿವೆ.been