ಚಳ್ಳಕೆರೆ: ಉದ್ಘಾಟನೆ ಭಾಗ್ಯವಿಲ್ಲದೇ ನರಳುತ್ತಿದೆ ದೊಡ್ಡ ಉಳ್ಳಾರ್ತಿ ಸಮುದಾಯ ಆರೋಗ್ಯ ಕೇಂದ್ರ
ಇದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ದೊಡ್ಡ ಉಳ್ಳಾರ್ತಿ ಗ್ರಾಮ. ಕ್ಷೇತ್ರ ವ್ಯಾಪ್ತಿಯಲ್ಲೇ ಅತೀ ಹೆಚ್ಚು ಜನಸಂಖ್ಯೆ ಇರೋ ಗ್ರಾಮಗಳಲ್ಲಿ ಇದು ಕೂಡಾ ಒಂದು. ಈ ಗ್ರಾಮ ಆಂದ್ರ ಪ್ರದೇಶದ ಗಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೆಂದ್ರ ಸ್ಥಾನ ಕೂಡಾ ಹೌದು. ಇಂಥ ಬೃಹತ್ ಗಾತ್ರದ ಹಳ್ಳಿಯಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ೯ ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣವಾಗಿತ್ತು. ಅಂದಿನ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ಶ್ರೀರಾಮುಲು ಆಸ್ಪತ್ರೆಗೆ ಭೂಮಿ ಪೂಜೆ ಸಲ್ಲಿಕೆ ಮಾಡಿದ್ರು. ಇದೀಗ ೯ ಕೋಟಿ ವೆಚ್ಚದ ಸಮುದಾಯ ಆರೋಗ್ಯ ಕೇಂದ್ರ ಇದೀಗ ನಿರ್ಮಾಣವಾಗಿ ೨ ವರ್ಷಗಳೇ ಕಳೆದು ಹೋಗಿದೆ. ಹೈಟೆಕ್ ಮಾದರಿಯಲ್ಲಿ ಆಸ್ಪತ್ರೆ ನಿರ್ಮಾಣವಾಗಿದ್ದು, ಉದ್ಘಾಟನೆ ಇಲ್ಲದೆ ನರಳುತ್ತಿದೆ.