ಸೊರಬ ತಾಲೂಕಿನ ಬರಗಿಯಲ್ಲಿ ಬೀಡು ಬಿಟ್ಟಿರುವ ಜೋಡಿ ಕಾಡಾನೆ ಓಡಿಸೋದಕ್ಕೆ ಅರಣ್ಯ ಇಲಾಖೆಯಿಂದ ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಕುಮ್ಕಿ ಆನೆಗಳನ್ನು ಬಳಸಿ ಓಡಿಸೋದಕ್ಕೆ ಡಿಎಫ್ಓ ಮೋಹನ್ ಕುಮಾರ್ ನಿರ್ಧರಿಸಿದ್ದರು. ಅದರಂತೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಸಕ್ರೆಬೈಲಿನಿಂದ ನಾಲ್ಕು ಕುಮ್ಕಿ ಆನೆಗಳನ್ನು ಲಾರಿ ಮೂಲಕ ಲಿಂಗದಹಳ್ಳಿ ಕರೆತರಲಾಗಿದೆ. ನಾಲ್ಕು ಕುಮ್ಮಿ ಆನೆಗಳನ್ನು ಬಳಸಿ ಕೆಲವೇ ಕ್ಷಣಗಳಲ್ಲಿ ಬರಗಿಯಲ್ಲಿ ಬೀಡು ಬಿಟ್ಟಿರುವಂತ ಜೋಡಿ ಕಾಡಾನೆಗಳನ್ನು ಓಡಿಸೋ ಕಾರ್ಯಾಚರಣೆ ಅರಣ್ಯ ಇಲಾಖೆಯಿಂದ ಆರಂಭವಾಗುತ್ತದೆ. ಕಾಡಾನೆಗಳನ್ನು ಕುಮ್ಕಿ ಆನೆ ಬಳಸಿ ಅರಣ್ಯ ಇಲಾಖೆಯಿಂದ ಓಡಿಸೋ ಕಾರ್ಯಾಚರಣೆ ನಡೆಯಲಿದ್ದು ಕಾರ್ಯಾಚರಣೆ ಗೆ ಸಾರ್ವಜನಿಕರು ಸಹಕರಿಸಿ ಎಂದರು