ಮಂಡ್ಯ: HDK ಸಿಎಂ ಆಗಿದ್ದೇ ಮ್ಯಾಜಿಕ್: ಪಟ್ಟಣದಲ್ಲಿ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಲೇವಡಿ
Mandya, Mandya | Oct 25, 2025 ಹೆಚ್.ಡಿ.ಕುಮಾರಸ್ವಾಮಿ 2 ಸಾರಿ ಸಿಎಂ ಆಗಿದ್ದೇ ಮ್ಯಾಜಿಕ್ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಲೇವಡಿ ಮಾಡಿದರು. ಶನಿವಾರ ನಾಗಮಂಗಲ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸ್ವಂತ ಅಧಿಕಾರದ ಮೇಲೆ ಸಿಎಂ ಆಗಲಿಲ್ಲ. ಮತ್ತೆ ಇದೇ ರೀತಿ ಕರ್ನಾಟಕದಲ್ಲಿ ಅತಂತ್ರ ಪರಿಸ್ಥಿತಿ ಬರಲಿ ಎಂದು ಕೊಂಡಿದ್ದಾರೆ ಎಂದು ಟೀಕಿಸಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡ ಬಳಿಕ ರಾಜ್ಯದಲ್ಲಿ ಜೆಡಿಎಸ್ ಮಾಯವಾಗಿದೆ ಎಂದರು. ಬಿಜೆಪಿ ಮತಚೋರಿ ಮೂಲಕ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಅ ಮೂಲಕ ತಂತ್ರಜ್ಞಾನದ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿದರು.