ಕಾಲೇಜು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ವ್ಯಕ್ತಿಯೊಬ್ಬರು ಪಿಸ್ತೂಲು ತೋರಿಸಿ ಪ್ರಾಣ ಬೆದರಿಕೆ ಹಾಕಿರುವ ಗಂಭೀರ ಘಟನೆ ನಗರದಲ್ಲಿ ನಡೆದಿದೆ. ಸದಾಶಿವಗಡ ಸಮೀಪದ ದೇವಭಾಗದ ನಿವಾಸಿ ಹಾಗೂ ನಂದನಗದ್ದಾ ಟೋಲ್ ನಾಕಾದ ಪ್ರಿಮಿಯರ್ ಕಾಲೇಜಿನ ವಿದ್ಯಾರ್ಥಿಯಾಗಿರುವ ದರ್ಶನ್ ಪುರಂದರ ತಾಂಡೇಲ್ ಬೆದರಿಕೆಗೊಳಗಾದವರು. ಈ ಸಂಬಂಧ ಬಿಣಗಾ ನಿವಾಸಿ ಸಂದೀಪ ಕೆ. ನಾಯ್ಕ ಎಂಬುವವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮಧ್ಯಾಹ್ನ 3ರ ಸುಮಾರು ಪ್ರಕರಣ ದಾಖಲಾಗಿದೆ.