ಮೊಳಕಾಲ್ಮುರು: ಓದೋಬಯ್ಯನಹಟ್ಟಿ ಗ್ರಾಮದಲ್ಲಿ ಶೇಂಗಾ ಬಿಡಿಸುವ ಮಿಷಿನ್ ಗೆ ಮಹಿಳೆ ಕೂದಲು ಸಿಕ್ಕಿಕೊಂಡು ಸಾವು
*ಶೇಂಗಾ ಬಿಡಿಸುವ ಮಿಷಿನ್ ಗೆ ಮಹಿಳೆ ಕೂದಲು ಸಿಕ್ಕಿಕೊಂಡು ಸಾವು* ಮೊಳಕಾಲ್ಮುರು:-ಶೇಂಗಾ ಬಿಡಿಸುವ ಮಿಷಿನ್ ಬೆಲ್ಟ್ ಗೆ ಮಹಿಳೆಯ ಟವಲ್ ಮತ್ತು ಕೂದಲು ಸಿಕ್ಕಿಕೊಂಡು ದಾರುಣವಾಗಿ ಸಾವನ್ನಪ್ಪಿದ್ದಾಳೆ. ಓದೋಬಯ್ಯನಹಟ್ಟಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ 10:15ರ ಸಮಯದಲ್ಲಿ ಕಣದಲ್ಲಿದ್ದ ಶೇಂಗಾ ಬಳ್ಳಿಯಿಂದ ಕಾಯಿಗಳನ್ನು ಬೇರ್ಪಡಿಸುವ ಸಲುವಾಗಿ ಶೇಂಗಾ ಬಿಡಿಸುವ ಯಂತ್ರ ತರಿಸಲಾಗಿತ್ತು.ಕಾರ್ಯನಿರ್ವಹಿಸುತ್ತಿದ್ದ ಯಂತ್ರದಲ್ಲಿನ ಶೇಂಗಾ ಬಳ್ಳಿಯನ್ನು ತೆಗೆಯುತ್ತಿದ್ದ ವೇಳೆ ಭಾಗ್ಯಮ್ಮಳ ತಲೆಗೆ ಸುತ್ತಿಕೊಂಡಿದ್ದ ಟವಲ್ ಮತ್ತು ಕೂದಲು ಯಂತ್ರದ ಬೆಲ್ಟ್ ಗೆ ಸಿಕ್ಕಿಕೊಂಡಿ ತಿರುಗಿದೆ.