ರಾಯಚೂರು ಅಪಾಯಕಾರಿಯಾದ ಕೋನೋಕಾರ್ಪಸ್ ಗಿಡಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಪರಿಸರ ಪ್ರೇಮಿ ವಿನಯ ಛಲವಾದಿ ಅವರು ಆಗ್ರಹಿಸಿದರು. ಶನಿವಾರ 10 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ನಗರದ ಐಬಿ ರಸ್ತೆಯಿಂದ ಆಶಾಪುರ ಕ್ರಾಸ್ ವರೆಗೆ ಹಾಗೂ ಲಿಂಗಸೂಗೂರು ರಸ್ತೆಯ ಮಧ್ಯಭಾಗದಲ್ಲಿ ಕೋನೋಕಾರ್ಪಸ್ ಗಿಡಗಳನ್ನು ನೆಡಲಾಗಿರುವುದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಿದರು. ಕೋನೋಕಾರ್ಪಸ್ ಗಿಡವು ಕಾರ್ಬನ್ ಡೈಆಕ್ಸೈಡ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತದೆ, ಇದರಿಂದ ಜನಸಾಮಾನ್ಯರಿಗೆ ಉಸಿರಾಟದ ತೊಂದರೆಗಳು ಉಂಟಾಗುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.