ಡಿ.4,ಗುರುವಾರ ಮಧ್ಯಾಹ್ನ 1ಕ್ಕೆ, ಕುರುಗೋಡು ತಾಲೂಕಿನ ಬೈಲೂರು ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಶಂಕುಸ್ಥಾಪನೆ ಮಾಡಿ, ಮಾದ್ಯಮದವರೊಂದಿಗೆ ಮಾತನಾಡಿದ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ರವರು, ಈ ಶಾಲೆಯಿಂದ ಬಡ ಮಕ್ಕಳಿಗೆ ವಿದ್ಯಾಭ್ಯಾಸ ದೊರೆಯಲಿದೆ ಎಂದರು ನಂತರ ತಾಲೂಕಿನ ಹಲವಾರು ಗ್ರಾಮಗಳ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿದೆ, ಇನ್ನು ಟ್ರ್ಯಾಕ್ಟರ್ ಗಳಲ್ಲಿ ಸಾಮರ್ಥ್ಯ ಗಿಂತ ಹೆಚ್ಚಿನ ಭತ್ತದ ಹುಲ್ಲನ್ನು ಕೊಂಡೋಯ್ಯುವಾಗ ರೈತರು ಹೆಚ್ಚಾರವಹಿಸಿ, ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡ ಘಟನೆಗಳು ನನ್ನ ಗಮನಕ್ಕೆ ಬಂದಿವೆ, ರೈತರು ಸುರಕ್ಷಿತವಾಗಿ ಇರಬೇಕು ಎಂದು ಸಲಹೆ ನೀಡಿದ್ರು.