ಗಂಗಾವತಿ: ಹೇಮಗುಡ್ಡ ದುರ್ಗಾಪರಮೇಶ್ವರಿಯ ಅಂಬಾರಿಯನ್ನ ಹೊತ್ತು ಹೆಜ್ಜೆ ಹಾಕಿದ ಗಜರಾಜ, ಮೂಲ ದಸರಾ ಕಣ್ತುಂಬಿಕೊಂಡ ಸಾವಿರಾರು ಭಕ್ತರು...
ಮೈಸೂರು ದಸರಾ ಗೆ ಮೂಲ ಪ್ರೇರಣೆಯಾದ ಗಂಡುಗಲಿ ಕುಮಾರರಾಮನ ಹೇಮಗುಡ್ಡದಲ್ಲಿ ಅದ್ದೂರಿಯಾಗಿ ದಸರಾ ಜಂಬೂ ಸವಾರಿ ಬುಧವಾರ ಸಾಯಂಕಾಲ 5:30ರ ಸುಮಾರಿಗೆ ನೆರವೇರಿತು ಮರದ ಅಂಬಾರಿಯಲ್ಲಿ ದುರ್ಗಾಪರಮೇಶ್ವರಿಯ ಮೂರ್ತಿಯನ್ನು ಹೊತ್ತು ಗಜರಾಜ ಹೆಜ್ಜೆ ಹಾಕಿದ್ದಾನೆ ಗಂಗಾವತಿ ತಾಲೂಕಿನ ಹೇಮ ಗುಡ್ಡದಲ್ಲಿ 11ನೇ ಶತಮಾನದ ಸಮಯದಲ್ಲಿ ಗಂಡುಗಲಿ ಕುಮಾರರಾಮ ಈ ಒಂದು ಜಂಬೂ ಸವಾರಿ ದಸರಾ ಉತ್ಸವವನ್ನು ಆರಂಭ ಮಾಡಿದರು ಈ ಹಿನ್ನೆಲೆಯಲ್ಲಿ ಮೈಸೂರು ದಸರಾ ಗೆ ಈ ಸ್ಥಳದಿಂದಲೇ ಮೂಲ ಪ್ರೇರಣೆಯಾಗಿದೆ ಇಂದು ಸಾವಿರಾರು ಭಕ್ತರು ಈ ಜಂಬುಸವಾರಿಯನ್ನ ಕಣ್ತುಂಬಿ ಕೊಂಡರು