ಕಲಬುರಗಿ : ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಬಳಿ ಕಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮೂವರು ಸ್ಥಳದಲ್ಲೆ ದುರ್ಮರಣಕ್ಕಿಡಾದ ಘಟನೆ ಜುಲೈ 6 ರಂದು ಮಧ್ಯಾನ 3 ಗಂಟೆಗೆ ಸಂಭವಿಸಿದೆ.. ಅಫಜಲಪುರ ತಾಲೂಕಿನ ಮೂಲದ ರಾಹುಲ್ ಮ್ಯಾಳೇಸಿ, ಗಿರೀಶ್ ಬಳ್ಳೂರ್ಗಿ, ಸಂಗು ಅಪರಗೊಂಡ ಸೇರಿದಂತೆ ಮೂವರು ಸ್ಥಳದಲ್ಲೆ ಮೃತಪಟ್ಟರೆ, ಮೃತ ರಾಹುಲ್ ಮ್ಯಾಳೇಸಿ ಪತ್ನಿ ರಾಧಿಕ ಗಂಭೀರ ಗಾಯಗೊಂಡಿದ್ದಾರೆ. ಇನ್ನೂ ಒಂದೇ ಕುಟುಂಬಸ್ಥರು ಸೇರಿಕೊಂಡು ಮಹಾರಾಷ್ಟ್ರದ ಕೊಲ್ಹಾಪುರದ ಮಹಾಲಕ್ಷ್ಮಿ ದೇವಿ ದರ್ಶನ ಪಡೆದುಕೊಂಡು ಕಾರಿನಲ್ಲಿ ವಾಪಾಸು ಆಗ್ತಿರೋವಾಗ ಅಥಣಿ ತಾಲೂಕಿನ ಮುರುಗುಂಡಿ ಬಳಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ದುರಂತ ಸಂಭವಿಸಿದೆ..