*ವಿಜೃಂಭಣೆಯಿಂದ ಜರುಗಿದ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ*
ಚಿತ್ರದುರ್ಗ:-ಚಳ್ಳಕೆರೆ ತಾಲೂಕಿನ ಎನ್.ಗೌರೀಪುರದಲ್ಲಿ ಗ್ರಾಮದ ಆರಾಧ್ಯ ಶ್ರೀ ಉಮಾಮಹೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರೆವೇರಿತು. ರಥೋತ್ಸವ ನಿಮಿತ್ತವಾಗಿ ಮೊದಲಿಗೆ ಉಮಾಮಹೇಶ್ವರ ಸ್ವಾಮಿಯ ರಥದ ಗಾಲಿಗೆ ಗೊಂಚಿಗಾರ್ ಸಿದ್ದಪ್ಪರವರ ಮನೆಯಿಂದ ಎಡೆ ತಂದು ಬಲಿ ಅನ್ನ ಅರ್ಪಿಸಲಾಯಿತು.ನಂತರ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ತಂದ ಭಕ್ತರು ಮೂರು ಸುತ್ತು ಪ್ರದಕ್ಷಿಣ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.