ಮಳವಳ್ಳಿ: ಪಟ್ಟಣದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ, ಉತ್ತಮ ಸಹಕಾರಿ ಸಂಘಗಳಿಗೆ ಪ್ರಶಸ್ತಿ ವಿತರಣೆ
ಮಳವಳ್ಳಿ : ಗ್ರಾಮೀಣ ಭಾಗದ ರೈತ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಿ ಉಳಿದಿರುವುದಕ್ಕೆ ಸಹಕಾರಿ ಕ್ಷೇತ್ರ ಪ್ರಬಲ ಕಾರಣ ಎಂದು ಶಾಸಕರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದ ಪಿ ಎಂ ನರೇಂದ್ರಸ್ವಾಮಿ ಪ್ರತಿಪಾದಿಸಿದ್ದಾರೆ. ಮಳವಳ್ಳಿ ಪಟ್ಟಣದ ಟಿಎಪಿಸಿ ಎಂಎಸ್ ಆವರಣದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಮಂಡ್ಯ ಜಿಲ್ಲಾಸಹಕಾರ ಒಕ್ಕೂಟ, ಜಿಲ್ಲಾ ಹಾಲು ಉತ್ಪಾದಕರ ಸಹ ಕಾರ ಸಂಘ, ಸಹಕಾರ ಇಲಾಖೆ ಟಿಎಪಿಸಿಎಂಎಸ್ ಮಳವಳ್ಳಿ ಇವರ ಸಂಯುಕ್ಷ ಆಶ್ರಮದಲ್ಲಿ ಏರ್ಪಾಡಾಗಿದ್ದ 72ನೇ ಆಖಿಲ ಭಾರತ ಸಹಕಾರ ಸಪ್ತಾಹ - 2025 ರ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸಹಕಾರಿ ಕ್ಷೇತ್ರವಿಲ್ಲದೆ ಸರ್ಕಾರವ ನ್ನೇ ನಂಬಿದ್ದರೆ ಈ ದೇಶದ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ ಎಂದರು.