ಹೆಬ್ರಿ: ಮುನಿಯಲು ಗೋಧಾಮದಲ್ಲಿ : ಗೋಕುಲಾನಂದ ವಿಹಾರ ಕಾರ್ಯಕ್ರಮ
Hebri, Udupi | Apr 1, 2024 ಹೆಬ್ರಿ ತಾಲೂಕಿನ ಮುನಿಯಾಲಿನ ಗೋಧಾಮದಲ್ಲಿ ರವಿವಾರ ಸಂಜೆ 6 ಗಂಟೆಗೆ ಗೋಕುಲಾನಂದ ವಿಹಾರ ಪ್ರಕೃತಿ ಮಾತೆ ಮಡಿಲಲ್ಲಿ ಒಂದು ಕ್ಷಣ ಎಂಬ ಕಾರ್ಯಕ್ರಮ ನಡೆಯಿತು. ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಇವರು ಪ್ರಕೃತಿ ಮತ್ತು ಕೃಷಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಅಜೆಕಾರು ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗೋಧಾಮದ ಅಧ್ಯಕ್ಷರಾದ ಡಾ. ಜಿ. ರಾಮಕೃಷ್ಣ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.