ಅಥಣಿ: ಸಪ್ತಸಾಗರ ಗ್ರಾಮದಲ್ಲಿ ಕಬ್ಬು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು
Athni, Belagavi | Nov 20, 2025 ಸಪ್ತಸಾಗರ ಗ್ರಾಮದಲ್ಲಿ ಕಬ್ಬು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು. ಶೋಭಾ ಶ್ರೀಕಾಂತ ಸಂಕ್ರಟ್ಟಿ (54) ಮೃತಪಟ್ಟ ಮಹಿಳೆ. ಸ್ವಂತ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ ಯಂತ್ರದ ಬುಡಕ್ಕೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಕಬ್ಬು ಕತ್ತರಿಸುವ ಯಂತ್ರಕ್ಕೆ ಸಿಲುಕಿ ರೈತ ಮಹಿಳೆ ಮೃತಪಟ್ಟ ಘಟನೆ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನಡೆದಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ