ಅಡಗೂರು ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಶುಕ್ರವಾರ ವಿಧಾನ ಪರಿಷತ್ ಸದಸ್ಯ ವಿಶ್ವನಾಥ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾ ಡಿದ ಅವರು, ಬದಲಾದ ರಾಜಕೀಯ ವ್ಯವಸ್ಥೆಗಳು ನನಗೆ ಬೇಸರ ತಂದಿವೆ. ನಾನು ರಾಜಕೀಯದಲ್ಲಿ ಹಲವು ಏಳುಬೀಳು ನೋಡಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರ ಋಣ ತೀರಿಸಲು ಈ ಬಾರಿ ಅವರಿಗೆ ಸಹಕಾರ ನೀಡುವೆ ಎಂದ ಅವರು, ಬಸವೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.