ಮುಳಬಾಗಿಲು: ಕೀರ್ತನೆಗಳ ಮೂಲಕ ಕನಕದಾಸರು ಸಮ ಸಮಾಜವನ್ನು ನಿರ್ಮಾಣ ಮಾಡುವ ಕಾಯಕ ಹೊಂದಿದವರು ; ತಹಶೀಲ್ದಾರ್ ಗೀತಾ
ಕೀರ್ತನೆಗಳ ಮೂಲಕ ಕನಕದಾಸರು ಸಮ ಸಮಾಜವನ್ನು ನಿರ್ಮಾಣ ಮಾಡುವ ಕಾಯಕವನ್ನು ರೂಡಿಸಿಕೊಂಡರು. ಇವರು ಎಲ್ಲಾ ಕಾಲಕ್ಕೂ ಸರ್ವಕಾಲಿಕವಾಗಿದ್ದಾರೆ ; ತಹಶೀಲ್ದಾರ್ ವಿ.ಗೀತಾ ಮುಳಬಾಗಿಲು ನಗರದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಕುರುಬ ಸಮುದಾಯದ ವತಿಯಿಂದ ಹಮ್ಮಿಕೊಂಡ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನಕದಾಸರು ಯಾವುದೇ ಒಂದು ವರ್ಗಕ್ಕೆ ಮತ್ತು ಸಮುದಾಯಕ್ಕೆ ಹಾಗೂ ಧರ್ಮಕ್ಕೆ ಸೀಮಿತ ಆದವರಲ್ಲ. ಅವರು ಇಡೀ ಮನುಕುಲಕ್ಕೆ ಬೇಕಾದಂತಹ ವ್ಯಕ್ತಿ. ಅವರ ಕೀರ್ತನೆಗಳು ಪ್ರತಿಯೊಂದು ಕಾಲಘಟ್ಟಕ್ಕೂ ಅನ್ವಯಿಸುತ್ತದೆ ಎಂದರು. ಕನಕದಾಸರ ಸಾಹಿತ್ಯ ಕೊಡುಗೆ ಅಪಾರವಾಗಿದೆ. ಅವರು ರ