ಬಳ್ಳಾರಿ: ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಚರ್ಚಾ ಸ್ಫರ್ಧೆ
ಚರ್ಚಾಸ್ಫರ್ಧೆಗಳಲ್ಲಿ ಮಂಡಿತವಾಗುವ ವಿಷಯಗಳಿಂದ ಆಯಾ ವಲಯದ ಆಳ-ಆಗಲ ಅರಿಯಲು ಮತ್ತು ಜ್ಞಾನಾಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಹೇಳಿದರು. ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನ.18,ಮಂಗಳವಾರ ಮಧ್ಯಾಹ್ನ 12 ವಿದ್ಯಾರ್ಥಿ ಕಲ್ಯಾಣ ಘಟಕ ಮತ್ತು ರಾಜ್ಯ ಸಹಕಾರ ಮಹಾಮಂಡಳ ಜಂಟಿ ಸಹಭಾಗಿತ್ವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಹಕಾರ ಕ್ಷೇತ್ರದ ಕುರಿತು ಏರ್ಪಡಿಸಿದ್ದ ಚರ್ಚಾಸ್ಫರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ಫರ್ಧಾತ್ಮಕತೆ ಎಂಬುದು ಎಲ್ಲೆಡೆ ಅಗತ್ಯವಿರುವ ವಸ್ತು ವಿಷಯವಾಗಿದೆ. ಪ್ರಚಲಿತ ವಿದ್ಯಮಾನಗಳ ಅಥವಾ ಗಾಂಧ