ಶಿರಸಿ, : ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯನ್ನು ಖಂಡಿಸಿ, ಶಿರಸಿಯ ಎಂ ಇ ಎಸ್ ಮೈದಾನ ದಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಬೃಹತ ಸಮಾವೇಶ ನಡೆಯಿತು.ಈ ವೇಳೆ ಸ್ವರ್ಣವಲ್ಲೀ ಶ್ರೀಗಳು ಮಾತನಾಡಿಬೇಡ್ತಿ-ವರದಾ ನದಿ ತಿರುವು ಯೋಜನೆ ಅತಾರ್ಕಿಕ ಹಾಗೂ ಅವೈಜ್ಞಾನಿಕ ಯೋಜನೆಯಾಗಿದ್ದು ಕೈಬಿಡುವಂತೆ ಅಗ್ರಹಿಸಿದರಲ್ಲದೆ ಅವೈಜ್ಞಾನಿಕವಾಗಿ ಜಾರಿಗೆ ತರಲು ಉದ್ದೇಶಿಸಿರುವ ಬೇಡ್ತಿ ನದಿ ತಿರುವು ಯೋಜನೆಯನ್ನು ಕೈಬಿಡದಿದ್ದರೆ, ಜಿಲ್ಲೆಯ ಜನತೆ ಸಾಮೂಹಿಕವಾಗಿ ಚುನಾವಣೆಯನ್ನು ಬಹಿಷ್ಕರಿಸ ಬೇಕಾದಿತು ಎಂದು ಎಚ್ಚರಿಸಿದರು.