ರಾಜ್ಯದ ಮುಖ್ಯಮಂತ್ರಿ-ಉಪ ಮುಖ್ಯಮಂತ್ರಿಗಳು ಉಪಹಾರಕ್ಕೆಂದು ಅವರವರ ಮನೆಗೆ ಹೋಗಿ ಬಂದಿದ್ದಾರೆ. ಪರಸ್ಪರರು ಮುಕ್ತವಾಗಿ ಮಾತನಾಡಿ ಚರ್ಚಿಸಿ ಕ್ಲಾರಿಟಿ ಕೊಟ್ಟಿದ್ದಾರೆ ಎಂದು ರಾಜ್ಯದ ಕಾರ್ಮಿಕ ಸಚಿವ ಸಂತೋಷ್ಲಾಡ್ ಹೇಳಿದ್ದಾರೆ. ಸಂಡೂರು ತಾಲ್ಲೂಕಿನ ವಿಠಲಾಪುರದಲ್ಲಿ ಬುಧವಾರ ಮಧ್ಯಾಹ್ನ 2ಗಂಟೆಗೆ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡ ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆಯ ಬಗ್ಗೆ ( ಪವರ್ ಷೇರಿಂಗ್ ಬಗ್ಗೆ ) ಪದೇ, ಪದೇ ಕೇಳಿದರೆ, ನಾನೇನು ಹೇಳಲಿಕ್ಕೆ ಆಗುವುದಿಲ್ಲ, ಸಿಎಂ-ಡಿಸಿಎA ಮಾತನಾಡಿ ಈಗಾಗಲೇ ಕ್ಲಾರಿಟಿ ನೀಡಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ಯಾರಿಗೇ ಆಗಲಿ ಅಧಿಕಾರ ಎಂಬುದು ಶಾಶ್ವತ ಅಲ್ಲ. ಈ ಫಿಲಾಸಫಿ ಎಲ್ಲರಿಗೂ ಗೊತ್ತಿದೆ, ನಾವು ಗೌತಮ ಬುದ್ಧ ಅವರ ತ