ರಾಯಚೂರು ನಗರದ ಕನ್ನಡ ಭವನದಲ್ಲಿ ಸೋಮವಾರ 12 ಗಂಟೆಗೆ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮತಿ ದರ್ಪಣ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು. ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಜಯಲಕ್ಷ್ಮೀ ಮಂಗಳ ಮೂರ್ತಿ ಅವರು ಸಾಹಿತ್ಯ ಒಳಗೊಳ್ಳುವ ವಸ್ತು ತುಂಬಾ ವಿಶಾಲವಾಗಿದೆ. ಅದಕ್ಕೆ ಯಾವ ಮಿತಿಯೂ ಇಲ್ಲದೆ ತನ್ನ ಪರಿಧಿಯನ್ನು ವಿಸ್ತರಿಸುತ್ತಾ ಸಾಗುತ್ತದೆ. ಮತಿ ದರ್ಪಣೆ ಕವಿನಾಂ ವಿಶ್ವಂ ಪ್ರತಿಫಲತಿ ಎನ್ನುವ ನಾಗಚಂದ್ರನ ಮಾತಿನಂತೆ ಇದೆ ಎಂದರು.