ಮುಧೋಳ: ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಲ್ಲು ತೂರಾಟ ಪ್ರಕರಣ,ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಾಗಿದೆ,ನಗರದಲ್ಲಿ ವಿಠ್ಠಲ ಹೊಸಮನಿ
ಗೋದಾವರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿನ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಾಗೂ ಕಲ್ಲುತೂರಾಟ ಪ್ರಕರಣ. ಕಲ್ಲು ತೂರಾಟದಲ್ಲಿ ಗಾಯಗೊಂಡ ರೈತ ವಿಠಲ ಹೊಸಮನಿ. ಫ್ಯಾಕ್ಟರಿ ಪರವಾಗಿ ಬಂದ 5 ಜನರ ಪೈಕಿ. ೩ ನೇ ಆರೋಪಿ ಎಂದು ವಿಠ್ಠಲ ವಿರುದ್ಧ ಎಫ್ ಐ ಆರ್. ಕಲ್ಲೇಟಿನಿಂದ ವಿಠ್ಠಲ ಹಣೆ ಹಾಗೂ ಮೂಗಿಗೆ ಗಾಯ. ಮೊದಲು ನನ್ನ ಮೇಲೆಯೇ ಕಲ್ಲು ತೂರಾಟವಾಗಿದೆ. ಆದರೆ ನಾನು ಕಲ್ಲು ತೂರಾಟದಲ್ಲಿ ಭಾಗಿ ಅಂತ ನನ್ನ ಮೇಲೆಎಫ್ ಐ ಆರ್ ಮಾಡಿದ್ದಾರೆ. ನನ್ನ ಹೊಲ ಫ್ಯಾಕ್ಟರಿ ಪಕ್ಕಾನೆ ಇದೆ. ನಾನು ಹೊಲದಲ್ಲಿ ನಿಂತಾಗ ನನ್ನ ಮೇಲೆ ಕಲ್ಲುತೂರಾಡಿದ್ದಾರೆ. ನಿಜವಾದ ಆರೋಪಿಗಳನ್ನು ಪೊಲೀಸರು ಬಿಟ್ಟಿದ್ದಾರೆ.