ಶೀತಪೀಡಿತ ಗ್ರಾಮಗಳ ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನಲೆಯಲ್ಲಿ ಕೋರ್ಟ್ ಆದೇಶದಂತೆ ಕೆ.ಆರ್. ಪೇಟೆ ಹೇಮಾವತಿ ನೀರಾವರಿ ಇಲಾಖೆ ಕಛೇರಿ ಸಾಮಗ್ರಿ ಜಪ್ತಿ ಮಾಡಲಾಯಿತು. ಮಂಗಳವಾರ ಮಧ್ಯಾಹ್ನ ಪಟ್ಟಣದ ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯದ ಆದೇಶದಂತೆ, ಹೇಮಾವತಿ ಜಲಾಶಯ ಯೋಜನೆಯ ನಂ.3ರ ವಿಭಾಗ ಕಛೇರಿ ಪೀಠೋಪಕರಣಗಳು ಹಾಗೂ ಸಾಮಗ್ರಿಗಳನ್ನು ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ಗಂಗನಹಳ್ಳಿ ಹಾಗೂ ಕಳ್ಳನಕೆರೆ ಗ್ರಾಮಸ್ಥರು ತೆರಳಿದರು. ಶೀತಪೀಡಿತ ಗ್ರಾಮಗಳ ರೈತರಿಗೆ ರಾಜ್ಯ ಸರ್ಕಾರವು ಸೂಕ್ತ ಪರಿಹಾರವನ್ನು ನೀಡದೆ ಬೇಜವಾಬ್ದಾರಿತನ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯವು ನಂ.03 ಕಾರ್ಯಪಾಲಕ ಅಭಯಂತರರ ಕಛೇರಿಯ ಪೀಠೋಪಕರಣ ಜಪ್ತಿ ಆದೇಶ ನೀಡಿದೆ.