ಕಲಬುರಗಿ ಬಾಪೂನಗರದ ಮಾಂಗರವಾಡಿ ಗಲ್ಲಿಯಲ್ಲಿ ಹಳೆಯ ಸರ್ಕಾರಿ ಶಾಲೆ ಹತ್ತಿರ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಖಚಿತ ಬಾತ್ಮಿಯ ಮೇರೆಗೆ ಬ್ರಹ್ಮಪೂರ ಠಾಣೆ ಪಿಐ ಮಹಾಂತೇಶ ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ ಸೂರತಕುಮಾರ ಎಂಬ 55 ವಯಸ್ಸಿನ ವ್ಯಕ್ತಿಯನ್ನು ಬಂಧಿಸಿದ್ದಾಗಿ ಗುರುವಾರ 4 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತನಿಂದ 260 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬೀದರ ಜಿಲ್ಲೆಯಿಂದ ಗಾಂಜಾ ಖರೀದಿ ಮಾಡಿ ಕಲಬುರಗಿಯಲ್ಲಿ ಮಾರಾಟ ಮಾಡುತ್ತಿದ್ದೇನೆಂದು ಆರೋಪಿತ ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ N.D.P.S Act ಕಲಂ 20(b)(II)(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.