ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧರೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಯೋಧ ಲೋಕೇಶ್ (44) ಮೃತಪಟ್ಟ ಮಂಡ್ಯ ಜಿಲ್ಲೆಯ ಸುಪುತ್ರರಾಗಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮೈಲಾರ ಪಟ್ಟಣದವರಾದ ಯೋಧ ಲೋಕೇಶ್ ಕುಟುಂಬ ಸದ್ಯ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ವಾಸವಿದ್ದರು. ಭಾರತೀಯ ಸೇನೆಯಲ್ಲಿ ಅಮೃತಸರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಲೋಕೇಶ್ ಅವರು, ಇತ್ತೀಚಿಗೆ ಅನಾರೋಗ್ಯದಿಂದ ಅಮೃತಸರದ ಸೇನಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಯೋಧ ಲೋಕೇಶ್ ಸಾವನ್ನಪ್ಪಿದ್ದಾರೆ.