ಕಂಪ್ಲಿ: ಐತಿಹಾಸಿಕ ಪಂಪಾಪತಿ ದೇವಾಲಯದಲ್ಲಿ ಕಾರ್ತಿಕೋತ್ಸವ ಭಕ್ತರಿಂದ ಭಕ್ತಿಭಾವದ ಆಚರಣೆ
Kampli, Ballari | Nov 17, 2025 ನ.17,ಸೋಮವಾರ ಸಂಜೆ 7ಕ್ಕೆ ಕಂಪ್ಲಿಯ ಐತಿಹಾಸಿಕ ಶ್ರೀ ಪಂಪಾಪತಿ ದೇವಸ್ಥಾನದಲ್ಲಿ ಇಂದು ಕಾರ್ತಿಕೋತ್ಸವವನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೆ ದೇವಾಲಯಕ್ಕೆ ಭಕ್ತರ ಹರಿವು ಹೆಚ್ಚಿದ್ದು, ಪುರುಷರು ಹಾಗೂ ಮಹಿಳೆಯರು ದೇವಾಲಯ ಪ್ರಾಂಗಣದಲ್ಲಿ ದೀಪಗಳನ್ನು ಹಚ್ಚಿ, ಶ್ರೀ ಪಂಪಾಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯ ಆವರಣ ದೀಪಾಲಂಕಾರದಿಂದ ಕಂಗೊಳಿಸಿದ್ದು, ಭಕ್ತರ ನಾದಸಂಕೀರ್ತನೆ, ವೇದಘೋಷ ಕಾರ್ಯಕ್ರಮಗಳು ಆಚರಣೆಗೆ ಮತ್ತಷ್ಟು ಸೊಬಗು ನೀಡಿದವು