ಶ್ರೀರಂಗಪಟ್ಟಣ: ಶ್ರೀನಿವಾಸ ಅಗ್ರಹಾರದಲ್ಲಿ ಮನೆ ಮುಂದೆ ಬೆಳೆದಿದ್ದ 3 ಲಕ್ಷ ರೂ. ಬೆಲೆ ಬಾಳುವ ಗಾಂಜಾ ವಶ
ಶ್ರೀರಂಗಪಟ್ಟಣ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ಮನೆಯ ಮುಂದೆ ಬೆಳೆದಿದ್ದ ₹ 3 ಲಕ್ಷ ಬೆಲೆ ಬಾಳುವ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆರೋಪಿ ಸುರೇಶ ಎಂಬುವವರ ಮನೆ ಮುಂದೆ 5 ಗಾಂಜಾ ಗಿಡ ಬೆಳೆದು ಸುತ್ತಲೂ ಸೀರೇ ಕಟ್ಟಿ ಮರೆಮಾಚಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 3 ಲಕ್ಷ ಬೆಲೆ ಬಾಳುವ 10 ಕೆ.ಜಿ 100 ಗ್ರಾಂ ತೂಕದ ಹಸಿ ಗಾಂಜಾ ಗಿಡಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಯ ವಿರುದ್ದ NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಲಾಗಿದೆ ಎಂದು ಗುರುವಾರ ನಗರದಲ್ಲಿ ಎಸ್ಪಿ ಕಚೇರಿ ಮಾಹಿತಿ ನೀಡಿದೆ.ಕಾರ್ಯಾಚರಣೆಯಲ್ಲಿ ಕಂದಾಯ, ಪೊಲೀಸ್ ಇಲಾಖಾ ಅಧಿಕಾರಿಗಳು ಮತ್ತು ಪಂಚರು ಹಾಜರಿದ್ದರು.