ಚಳ್ಳಕೆರೆ ನಗರದ ಅಂಗಡಿಗಳ ಮೇಲೆ ನಗರಸಭೆ ಪೌರಯುಕ್ತ ಜಗರೆಡ್ಡಿ ಅವರು ದಾಳಿ ಮಾಡಿ ನಿಷೇಧಿತ ಪ್ಲಾಸ್ಟಿಕ್ ಗಳನ್ನ ವಷಕ್ಕೆ ಪಡೆದಿದ್ದಾರೆ. ಇನ್ನೂ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಈ ಒಂದು ದಾಳಿ ನಡೆಸಿದ್ದು ತರಕಾರಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಮೂಲಕ ಪರಿಸರವನ್ನು ರಕ್ಷಿಸಬಹುದು. ಪ್ಲಾಸ್ಟಿಕೆ ಬಳಕೆ ನಿಲ್ಲಿಸಿ ಬಟ್ಟೆ ಬ್ಯಾಗ್ ಗಳನ್ನ ಖರೀದಿ ಮಾಡಿ ಮತ್ತೆ ಪ್ಲಾಸ್ಟಿಕ್ ಬಳಕೆ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ ಎಂದು ಪೌರಯುಕ್ತ ಜಗರೆಡ್ಡಿ ತರಕಾರಿ ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ..