ಪಟ್ಟಣದ ಗ್ಯಾಲಾಕ್ಸಿ ಮೀಟಿಂಗ್ ಹಾಲ್ ನಲ್ಲಿ ನಡೆದ ಸುವರ್ಣಗಿರಿ ಪ್ರಕಾಶನ ಮಾನ್ವಿ ರವರ ಪ್ರಕಾಶನದ ಆಧುನಿಕ ವಚನಗಳ ಸಂಕಲನ ನುಡಿ ನೈವೇದ್ಯ ಕೃತಿಯನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಮಹಾಂತೇಶ ಮಸ್ಕಿ ಭಾನುವಾರ 5 ಗಂಟೆಗೆ ಲೋಕಾರ್ಪಣೆ ಗೊಳಿಸಿ ಮಾತನಾಡಿ 12 ನೇ ಶತಮಾನದಲ್ಲಿ ಬದುಕಿಗೆ ಬೇಕಾಗಿರುವ ಬದುಕಿನಲ್ಲಿ ನುಡಿಯುವುದನ್ನೆ ನಡೆಯಾಗಿಸಿಕೊಂಡು ಬರೆದ ಸಾಹಿತ್ಯ ಪ್ರಕಾರವನ್ನು ವಚನಗಳೇಂದು ಕರೆಯಲಾಯಿತು ಎಂದರು.