ಚಿತ್ರದುರ್ಗದ ವಿದ್ಯಾನಗರದಲ್ಲಿ 15 ನೇ ಶತಮಾನದಲ್ಲಿ ವ್ಯಾಸರಾಯರಿಂದ ಸ್ಥಾಪಿತವಾದದ್ದು ಎಂದೇ ಹೇಳಲಾಗುವ ಆಂಜನೇಯಸ್ವಾಮಿ ದೆವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು. ಕಡೆಯ ಕಾರ್ತಿಕೋತ್ಸವ ಹಿನ್ನೆಲೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ರು. ಕಾರ್ತಿಕೋತ್ಸವ ಪ್ರಯುಕ್ತ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಗಿತ್ತು. ಸಾಯಂಕಾಲವಾಗ್ತಿದ್ದಂತೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಆಂಜನೇಯಸ್ವಾಮಿ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು. ನಂತರ ದೇವಸ್ಥಾನದ ಆವರಣದಲ್ಲಿ ಸಾವಿರಾರು ದೀಪ ಬೆಳಗಿದ ಭಕ್ತರು ಪ್ರಸಾದ ವಿನೊಯೋಗ ಮಾಡಿ ಆಂಜನೇಯಸ್ವಾಮಿ ಕೃಪೆಗೆ ಪಾತ್ರರಾದ್ರು.