ಶಹಾಬಾದ: ಹೊನಗುಂಟಾ ಗ್ರಾಮದ ಚಂದ್ರಲಾಂಬ ದೇವಿಯ ಮೈಮೇಲಿನ ಚಿನ್ನಾಭರಣ, ನಗದು ಕಳ್ಳತನ: ಸಿಸಿ ಟಿವಿಯಲ್ಲಿ ಕೃತ್ಯ ಸೆರೆ
ಕಲಬುರಗಿ : ಇತ್ತೀಚಿಗೆ ಈ ಕಳ್ಳ ಖಧೀಮರಿಗೆ ಮನೆಗಳು, ಅಂಗಡಿಗಳನ್ನೆ ಟಾರ್ಗೆಟ್ ಮಾಡ್ತಿದ್ರು.. ಆದರೆ ಇತ್ತೀಚಿಗೆ ಕಳ್ಳರ ವಕ್ರದೃಷ್ಟಿ ದೇವರ ಮೇಲೆ ಬಿದ್ದಿದೆ.. ಹೌದು.. ಕಲಬುರಗಿ ಜಿಲ್ಲೆ ಶಹಬಾದ್ ತಾಲ್ಲೂಕಿನ ಹೊನಗುಂಟಾ ಗ್ರಾಮದ ಚಂದ್ರಲಾಂಬ ದೇವಸ್ಥಾನದಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ..ನಾಲ್ಕೈದು ಜನರ ತಂಡ ದೇವಸ್ಥಾನದ ಬೀಗ ಮುರಿದು ದೇವಿಯ ಮೈಮೇಲಿನ 20 ಗ್ರಾಂನ ಚಿನ್ನದ ತಾಳಿ, ಹಾಗೂ ಹುಂಡಿಯಲ್ಲಿನ 20 ಸಾವಿರ ಹಣ ದೋಚಿಕೊಂಡು ಹೋಗಿದ್ದಾರೆ. ಅ25 ರಂದು ಮಧ್ಯಾನ 12 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೂ ಕಳ್ಳರ ಸಂಪೂರ್ಣ ಚಿತ್ರಣ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ