ಚಳ್ಳಕೆರೆ: ಡಿಸೆಂಬರ್ ಒಳಗಾಗಿ ಆಟೋ ಚಾಲಕರು ಕಡ್ಡಾಯವಾಗಿ ಎಲ್ಲಾ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು:ನಾಯಕನಹಟ್ಟಿ ಪಟ್ಟಣದಲ್ಲಿ ಪಿಎಸ್ ಐ ಪಾಂಡುರಂಗಪ್ಪ
ನಾಯಕನಹಟ್ಟಿ-: ಡಿಸೆಂಬರ್ ತಿಂಗಳ ಒಳಗಾಗಿ ಪ್ರತಿಯೊಬ್ಬ ಆಟೋ ಚಾಲಕರು ದಾಖಲಾತಿ ಸರಿಪಡಿಸಿಕೊಳ್ಳಬೇಕು ಎಂದು ಪಿ ಎಸ್ ಐ ಪಾಂಡುರಂಗಪ್ಪ ಹೇಳಿದರು. ನಾಯಕನಹಟ್ಟಿ ಪಟ್ಟಣದಲ್ಲಿ ಆಟೋ ಚಾಲಕರ ಸಭೆಯಲ್ಲಿ ಮಾತನಾಡಿದ ಅವರು ಆಟೋ ಚಾಲಕರು ಕಡ್ಡಾಯವಾಗಿ ತಮ್ಮ ವಾಹನಗಳ ಆರ್.ಸಿ, ವಿಮೆ, ಎಮಿಷನ್ ಟೆಸ್ಟ್ ಮತ್ತಿತರ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಸಮವಸ್ತ್ರ ಧರಿಸಬೇಕು. ಚಾಲನಾ ಪರವಾನಗಿ ಹೊಂದಿರಬೇಕು ಎಂದು ಸೂಚಿಸಿದರು. ಚಾಲಕರು ಅಗತ್ಯವಾದ ದಾಖಲೆಗಳನ್ನು ನೀಡಿ ವತಿಯಿಂದ ಚಾಲನಾ ಪರವಾನಗಿಯನ್ನು ಮಾಡಿಸಿಕೊಳ್ಳಬೇಕು, ಆಟೊ