ಕಡುಬಡತನದಲ್ಲಿ ಚಿನ್ನದ ಜೀರಾಮನಿ ಸರಾ ಮಾಡಿಸಿಕೊಂಡಿದ್ದೀವಿ. ಆದ್ರೆ ಶಹಬಾದ್ ದಿಂದ ಹೋಸಗೇರಿಗೆ ದೇವರಿಗೆ ಅಂತ ಹೋಗಲು ಬಸ್ ಹತ್ತುವಾಗ ಪ್ರಯಾಣಿಕರ ಸೋಗಿನಲ್ಲಿದ್ದ ಕಳ್ಳಿಯರು ತಳ್ಳಾಡಿದಂತೆ ಮಾಡಿ ಸರಾ ಕಳವು ಮಾಡಿದ್ದರು ಎಂದು ಶಹಬಾದ್ ಬಸ್ ನಿಲ್ದಾಣದಲ್ಲಿ ಸರಗಳ್ಳಿಯರ ಕೈ ಚಳಕಕ್ಕೆ ಸಿಲುಕಿ ಸರ ಕಳೆದುಕೊಂಡಿದ್ದ ಶಹಬಾದ್ ನಿವಾಸಿ ಅಜ್ಜಿ ಗೌರಮ್ಮ ಅಳಲು ತೋಡಿಕೊಂಡಿದ್ದಾರೆ. ಸುಮಾರು ಹೊತ್ತಿನ ಬಳಿಕ ಸರ ಕಳುವಾಗಿದ್ದು ಅರಿವಿಗೆ ಬಂದಿದ್ದು, ಎದೆ ಒಡೆದು ಆಸ್ಪತ್ರೆ ಪಾಲಾಗಿ ಚಿಕಿತ್ಸೆ ಪಡೆದಿದ್ದೇನೆ. ಈಗ ಕೇವಲ ಎರಡು ದಿನದಲ್ಲಿ ಕಳ್ಳಿಯರನ್ನ ಹಿಡಿದು ಸರ ವಾಪಸ ಕೊಡಸಿದ ಪೊಲೀಸರು ನನ್ನ ಪಾಲಿಗೆ ದೇವರಾಗಿದ್ದಾರೆ ಎಂದು ಅಳಲು ತೋಡಿಕೊಂಡರು ಗುರುವಾರ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ...