ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಏಕತಾ ಸಮಾವೇಶ ಅಂಗವಾಗಿ ನಗರದಲ್ಲಿ ಪೋಲಿಸ್ ಇಲಾಖೆ ವತಿಯಿಂದ ರನ್ ಪಾರ್ ಯುನಿಟಿ ಕಾರ್ಯಕ್ರಮ ಅ.೩೧ ಮುಂಜಾನೆ ೭ ಗಂಟೆಗೆ ನಡೆಯಿತು. ರ‍್ಯಾಲಿಯಲ್ಲಿ ಪೋಲಿಸ್ ಇಲಾಖೆ ಅಧಿಕಾರಿಗಳು, ತಹಸೀಲ್ದಾರ ಕಚೇರಿಯ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಸವೇಶ್ವರ ಸರ್ಕಲ್ ದಿಂದ ಆರಂಭವಾದ ರನ್ ಪಾರ್ ಯುನಿಟಿ ಸಾಕಾ ಕಾಲೇಜ್, ಮಹಾಂತ ಗಂಗೋತ್ರಿ, ಬಸ್ ನಿಲ್ದಾಣ, ಕಂಠಿ ಸರ್ಕಲ್, ದ್ವಾರಕಾ ಲಾಡ್ಜ್, ಗ್ರಾಮ ಚಾವಡಿ ಮಾರ್ಗವಾಗಿ ಗಾಂಧಿ ಚೌಕ ತಲುಪಿತು. ಶಹರ್ ಪೋಲಿಸ್ ಠಾಣೆಯ ಪಿಎಸ್‌ಐ ಮಂಜುನಾಥ ಪಾಟೀಲ, ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್‌ಐ ಎಸ್.ಆರ್.ನಾಯಕ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.