ರಾಯಚೂರು: ಕುರಿ ಹಿಂಡಿನಲ್ಲಿ ನೂಕು ನುಗ್ಗಲು ಉಂಟಾಗಿ 20 ಕುರಿಗಳ ಸಾವು
ಪುಚ್ಚಲದಿನ್ನಿ ಕುರಿ ಹಿಂಡಿನಲ್ಲಿ ನೂಕು ನುಗ್ಗಲು ಉಂಟಾಗಿ 20 ಕುರಿಗಳು ಮೃತಪಟ್ಟ ಘಟನೆ ಮಂಗಳವಾರ ಸಂಜೆ ರಾಯಚೂರು ತಾಲ್ಲೂಕಿನ ಪುಚ್ಚಲದಿನ್ನಿ ಗ್ರಾಮದಲ್ಲಿ ನಡೆದಿದೆ. ರಸ್ತೆ ಬದಿ ಹೋಗುತ್ತಿದ್ದ ವೇಳೆ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಬೆದರಿದ ಕುರಿಗಳು ಏಕಾಏಕಿ ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ನುಗ್ಗಿವೆ. ಇದರಿಂದ ಒಂದರ ಮೇಲೊಂದು ಬಿದ್ದ ಕಾರಣ ಉಸಿರುಗಟ್ಟಿ 20 ಕುರಿಗಳು ಮೃತಪಟ್ಟಿವೆ. ಪುಚ್ಚಲದಿನ್ನಿ ಗ್ರಾಮದ ದುಳ್ಳಯ್ಯ ಭೀಮಣ್ಣ ಅವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ.