ಕಲಬುರಗಿ : ಆಳಂದ ವೋಟಿ ಚೋರಿ ಆರೋಪ ಪ್ರಕರಣ ಶಾಸಕ ಬಿಆರ್ ಪಾಟೀಲ್ರವರ ಕಟ್ಟುಕಥೆ.. ನನ್ನ ಸಹಿತ ಮಗನಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಾರದಂತೆ ಕುತಂತ್ರ ಮಾಡಲಾಗಿದೆಯೆಂದು ಶಾಸಕ ಬಿಆರ್ ಪಾಟೀಲ್ ವಿರುದ್ಧ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಕಿಡಿಕಾರಿದ್ದಾರೆ.. ಡಿ13 ರಂದು ಮಧ್ಯಾನ 2 ಗಂಟೆಗೆ ಆಳಂದ ಪಟ್ಟಣದಲ್ಲಿ ಮಾತನಾಡಿದ ಅವರು, ನಾಳೆ ದೆಹಲಿಯಲ್ಲಿ ಇದೇ ವಿಚಾರಕ್ಕೆ ಸಮಾವೇಶ ಮಾಡ್ತಿದ್ದು, ಇದಕ್ಕೆ ಸಪೋರ್ಟ್ ಆಗಲಿ ಅಂತಾ ತರಾತುರಿಯಲ್ಲಿ ಎಸ್ಐಟಿ ಚಾರ್ಜ್ಶಿಟ್ ಸಲ್ಲಿಕೆ ಮಾಡಿದ್ದು, ನ್ಯಾಯಾಲಯದಲ್ಲಿ ನ್ಯಾಯ ಸಿಗೋ ವಿಶ್ವಾಸವಿದೆ ಅಂತಾ ಸುಭಾಷ್ ಗುತ್ತೇದಾರ್ ಹೇಳಿದ್ದಾರೆ.