ಚಿತ್ರದುರ್ಗ: ಮದಕರಿಪುರ ಲಂಬಾಣಿ ಹಟ್ಟಿ ಗ್ರಾಮದಲ್ಲಿ ಶಾಲಾ ಕೊಠಡಿ ಸಮಸ್ಯೆಯಲ್ಲಿ ವಿಧ್ಯಾರ್ಥಿಗಳು ಹೈರಾಣು
ಚಿತ್ರದುರ್ಗ ಹೊರ ಭಾಗದ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಶಾಲಾ ಕೊಠಡಿ ಇಲ್ಲದೇ ಜೀವ ಭಯದಲ್ಲೇ ವ್ಯಾಸಾಂಗ ಮಾಡುತ್ತಿದ್ದಾರೆ. ಕುಸಿಯುತ್ತಿರುವ ಸರಕಾರಿ ಶಾಲಾ ಮೇಲ್ಛಾವಣೆಯ ಕೆಳ ಭಾಗದಲ್ಲೇ ಆತಂಕದಿಂದ ಪಾಠ ಕೇಳುತ್ತಿದ್ದಾರೆ. 1-7 ತರಗತಿಯಲ್ಲಿ, ಸುಮಾರು 24ಮಕ್ಕಳು, ಓದುತ್ತಿದ್ದು ಮೂರೇ ಕ್ಲಾಸ್ ರೂಮ್ ಗಳುವೆ. ಒಂದೇ ಕ್ಲಾಸ್ ರೂಮ್, ಒಬ್ಬರೇ ಶಿಕ್ಷಕಿ, ಎರಡೆರಡು ತರಗತಿಗಳಿಗೆ ಒಮ್ಮೆಲೇ ಪಾಠ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಅರ್ಧದಿನ ಅಡುಗೆ ಮನೆ, ಇನ್ನರ್ಧ ದಿನ ಕ್ಲಾಸ್ ರೂಮ್ ಆಗಿ ಶಾಲಾ ಕೊಠಡಿ ಬಳಕೆ ಮಾಡಲಾಗುತ್ತಿದೆ. ಮೂಲಭೂತ ಸೌಕರ್ಯ ಕೊರತೆಗಳಿಂದ ಶಾಲಾ ದಾಖಲಾತಿ ಸಂಖ್ಯೆ ಕುಂಠಿತವಾಗಿದೆ. ಚಿತ್ರದುರ್ಗ ತಾಲೂಕಿನ ಮದಕರಿಪುರ ಲಂಬಾಣಿಹಟ್ಟಿ ಶಾಲೆಯ ದುಸ್ಥಿತಿ ಇದಾಗಿದೆ.