ಕಲಬುರಗಿಯ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಶ್ರೀಮತಿ ನಿರ್ಮಲಾ ಅನ್ನೋರು ದೂರು ದಾಖಲಿಸಿದ್ದಾರೆ. ಸರಫ ಬಜಾರದಲ್ಲಿ ಹಳೆ ಬಂಗಾರ ಕರಗಿಸಿ 8 ಗ್ರಾಂ ಗಟ್ಟಿ ಹಾಗೂ ಚಿನ್ನಾಭರಣ ಸೇರಿ ವಾನಿಟಿ ಬ್ಯಾಗಿನಲ್ಲಿ ಇಟ್ಟಿದ್ದ ಒಟ್ಟು 2.69 ಲಕ್ಷ ರೂ ಮೌಲ್ಯದ 19 ಗ್ರಾಂ ಆಭರಣವುಳ್ಳ ಪಾಕೇಟ್ ಕಳ್ಳತನವಾಗಿದೆ. ಜನತಾ ಬಜಾರ್ ಕ್ರಾಸ್ ಬಳಿ ಅಪರಿಚಿತರು ಬ್ಯಾಗಿನ ಚೈನ್ ತೆರೆದು ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆದಿದೆ ಎಂದು ಶನಿವಾರ ಏಳು ಗಂಟೆಗೆ ಮಾಹಿತಿ ನೀಡಿದ್ದಾರೆ...