ಭಟ್ಕಳ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ ಕುಮಾರ್ ಎನ್.ಎಂ ಅವರು ಭಟ್ಕಳ ಶಹರ ಪೊಲೀಸ್ ಠಾಣೆಗೆ ಬುಧವಾರ ಮಧ್ಯಾಹ್ನ 3.00 ಗಂಟೆ ಸುಮಾರಿಗೆ ಭೇಟಿ ನೀಡಿದರು. ಭೇಟಿಯ ಸಂದರ್ಭದಲ್ಲಿ ವಾರ್ಷಿಕ ಪರಿವೀಕ್ಷಣೆಯನ್ನು ಕೈಗೊಂಡು, ಕಡತಗಳನ್ನು ಪರಿಶೀಲಿಸಿ, ಹಾಜರಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.