ಮನಸ್ಸಿನ ಏಕಾಗ್ರತೆಗೆ ಧ್ಯಾನ ಅತಿಮುಖ್ಯ ಎಂದು ಕೆ ಎಸ್ ನವೀನ್ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ 9 ಗಂಟೆಗೆ ಚಿತ್ರದುರ್ಗದ ಮುರುಘಾ ಮಠದಲ್ಲಿ ವಿಶ್ವ ಧ್ಯಾನ ದಿನ ಆಯೋಜನೆ ಕುರಿತು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಶ್ರೀಮಠದ ಬಸವಕುಮಾರ ಶ್ರೀಗಳ ಸಾನಿಧ್ಯದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದು ಎಂ ಎಲ್ ಸಿ ಕೆ ಎಸ್ ನವೀನ್ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು ಡಿಸೆಂಬರ್ 21 ರಂದು ವಿಶ್ವ ಧ್ಯಾನ ದಿನ ಎಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಬಿಸಿದ್ದು ಪ್ರತಿ ವರ್ಷ ಆಚರಣೆ ಮಾಡಲಾಗುತ್ತಿದ್ದು ವಿಶ್ವದ 150 ಕ್ಕೂ ಹೆಚ್ಚು ದೇಶಗಳು ಇದಕ್ಕೆ ಬೆಂಬಲ ಕೊಟ್ಟಿದ್ದಾರೆ.