ಬಿಡುಗಡೆಗೂ ಮೊದಲೇ ಕೋಟೆನಾಡು ಚಿತ್ರದುರ್ಗಲ್ಲಿ ದರ್ಶನ್ ರ ಡೇವಿಲ್ ನ ಆಟ ಶುರುವಾಗಿದೆ. ಡಿಸೆಂಬರ್ 11 ರಂದು ನಟ ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಡೇವಿಲ್ ಬಿಡುಗಡೆಯಾಗಲಿದೆ. ಇನ್ನೂ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲು ನಟ ದರ್ಶನ್ ಮತ್ತೆ ಜೈಲು ಸೇರಿದ್ದು ಇತ್ತ ರೇಣುಕಾಸ್ವಾಮಿ ಮನೆಯಲ್ಲಿ ಇನ್ನೂ ಕೂಡ ಮನೆ ಮಗನ ಸಾವಿನ ದುಃಖದಲ್ಲಿ ಕುಟುಂಬಸ್ತರು ಇದ್ದು ನಿತ್ಯ ರೇಣುಕಾಸ್ವಾಮಿಯನ್ನ ನೆನೆದು ಕಣ್ಣೀರು ಹಾಕುತ್ತಿದ್ದು ಇದನ್ನೆಲ್ಲ ಬದಿಗೊತ್ತಿದ ಚಿತ್ರದುರ್ಗದಲ್ಲಿನ ದರ್ಶನ್ ಅಭಿಮಾನಿಗಳು ಮಾತ್ರ ಡೇವಿಲ್ ಸಿನಿಮಾಗೆ ಬಿಡುಗಡೆಗೆ ಆರು ದಿನಗಳ ಮುಂಚೆಯೇ ಅಬ್ಬರದ ಸ್ವಾಗತಕ್ಕೆ ಸಜ್ಜಾಗಿದ್ದಾರೆ