ವಾಟ್ಸಪ್'ನಲ್ಲಿ ಬಂದ ಎಪಿಕೆ ಲಿಂಕ್ ಓಪನ್ ಮಾಡಿದ ವ್ಯಕ್ತಿಯೊಬ್ಬರು ₹ 2.43 ಲಕ್ಷ ಕಳೆದುಕೊಂಡ ಘಟನೆ ಬಿಂಡಹಳ್ಳಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ನಿವೃತ್ತ ನೌಕರ ಬಿ. ಪಿ. ವಿಜೇಂದ್ರ ಹಣ ಕಳೆದುಕೊಂಡವರು. ಅ. 24ರಂದು ದೂರುದಾರರ ವಾಟ್ಸಪ್ ನಂಬರ್'ಗೆ ಯಾರೋ ಅಪರಿಚಿತರು ಎಸ್'ಬಿಐ ಮತ್ತು ಕೆವೈಸಿ ಎಂಬ ಎಪಿಕ್ ಲಿಂಕ್ ಕಳುಹಿಸಿದ್ದಾರೆ. ಗೊತ್ತಿಲ್ಲದೆ ಅದನ್ನು ಓಪನ್ ಮಾಡಿದ ತಕ್ಷಣ ವಿಜೇಂದ್ರ ಅವರ ಗಮನಕ್ಕೆ ಬಾರದೇ ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹ 2,43,479 ರೂ ಹಣ ಕಡಿತಗೊಂಡಿದ್ದು ಅಕ್ರಮವಾಗಿ ಹಣ ಕಡಿತಗೊಂಡಿದೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿರುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಮಂಡ್ಯ ಸಿ. ಇ. ಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.