ಶಿರಸಿ: ಶಿರಸಿಯ ನಿಲೇಕಣಿ, ಎಕ್ಕಂಬಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಹಸ್ರಾರು ಹೊಂಡ, ಜನರಿಂದ ಹಿಡಿಶಾಪ #localissue
ಶಿರಸಿ : ಪ್ರವಾಸಿಗರ ಸ್ವರ್ಗ ಎನ್ನುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆದ್ದಾರಿ ಪ್ರಯಾಣವೇ ಯಮಲೋಕಕ್ಕೆ ಹೋದಂತೆ ಎಂಬುವಂತಾಗಿದ್ದು ಒಂದೆಡೆ ಗುಡ್ಡ ಕುಸಿದರೇ ಮತ್ತೊಂದೆಡೆ ಹೊಂಡ ಗುಂಡಿ ತುಂಬಿದ ರಸ್ತೆಗಳಿಂದ ಜನರ ಪ್ರಾಣಕ್ಕೂ ಕುತ್ತು ತಂದಿದ್ದು ಹೆದ್ದಾರಿ ಪ್ರಾಧಿಕಾರಕ್ಕೆ ಜನ ಹಿಡಿ ಶಾಪ ಹಾಕುವಂತಾಗಿದೆ. ಅದರಲ್ಲೂ ಶಿರಸಿ - ಕುಮಟಾ, ಶಿರಸಿ ಹಾವೇರಿ ರಸ್ತೆಯಲ್ಲಿ ಸಹಸ್ರ ಹೊಂಡಗಳು ಬಿದ್ದಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೇ ಸಾಕು ಎನ್ನುವ ಸ್ಥಿತಿ ಬಂದೋದಗಿದೆ. ಜಿಲ್ಲೆಯ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ಉನ್ನತೀಕರಣ ಮಾಡುತ್ತಿದೆ. ಆದರೆ ಎಲ್ಲಾ ಕಡೆ ಅರ್ಧಂಬರ್ಧ ಎನ್ನುವಂತಾಗಿದೆ.