ಚಿತ್ರದುರ್ಗ ನಗರದಲ್ಲಿ ತಡರಾತ್ರಿ 12 ಗಂಟೆಗೆ ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಸ್ಪೇಷಲ್ ನೈಟ್ ರೌಂಡ್ಸ್ ಮಾಡಿದ್ದಾರೆ. ನಗರದ ಹಲವು ಏರಿಯಾಗಳಲ್ಲಿ ರಾತ್ರಿ ರೌಂಡ್ಸ್ ಮಾಡಿದ್ದಾರೆ.ಈ ವೇಳೆ ರಾತ್ರಿ ಸಮಯದಲ್ಲಿ ನಗರದಲ್ಲಿ ಓಡಾಟ ನಡೆಸುತ್ತಿದ್ದ ಸಾರ್ವಜನಿಕರಿಗೆ ವಿನಾ:ಕಾರಣ ಸಂಚಾರ ಮಾಡುವುದು ಸರಿಯಲ್ಲ ಎಂದು ಸೂಚನೆ ನೀಡಿದ್ದಾರೆ. ಅಲ್ಲದೆ ಇದೇ ವೇಳೆ ರಾತ್ರಿ ವೇಳೆ ಸಂಚರಿಸುವವರಿಗೆ ಸುರಕ್ಷಾ ಸೂಚನೆ ಗಳನ್ನ ತಿಳಿಸಿದ್ದಾರೆ. ಅಲ್ಲದೆ ಚಿತ್ರದುರ್ಗ ಜಿಲ್ಲಾ ನಿಸ್ತಂತು ಕೇಂದ್ರಕ್ಕೆ ಭೇಟಿ ಕೊಟ್ಟು, ಕಡತಗಳನ್ನ ಪರಿಶೀಲನೆ ನಡೆಸಿದ್ದಾರೆ