ರಾಜ್ಯದ ಗಡಿಭಾಗಗಳಲ್ಲಿ ನಾಡವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಎಂಇಎಸ್ ಅನ್ನು ತಕ್ಷಣವೇ ನಿಷೇಧಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಎಂ. ಎಸ್ ವೆಂಕಟೇಶ್ ಶುಕ್ರವಾರ 10 ಗಂಟೆಗೆ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿ, ನಿಪ್ಪಾಣಿ, ಬೀದರ್ ಭಾಲ್ಕಿ ಹಾಗೂ ಕಾರವಾರವನ್ನು ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಎಂಇಎಸ್ ನ ಬೇಡಿಕೆ ಸಂಪೂರ್ಣ ಅನಧಿಕೃತ ಮತ್ತು ರಾಜ್ಯದ ಏಕತೆಗೆ ಧಕ್ಕೆ ತರಿಸುವ ರೀತಿಯಲ್ಲಿದೆ ಎಂದು ಆರೋಪಿಸಿದರು.