ಚಳ್ಳಕೆರೆ: ನಾಯಕನಹಟ್ಟಿ ಪಟ್ಟಣದಲ್ಲಿ ಉಚಿತ ಅರೋಗ್ಯ ತಪಾಸಣಾ ಮತ್ತು ಅರೋಗ್ಯ ಶಿಬಿರ
ಚಳ್ಳಕೆರೆ:- ಪುಣ್ಯಕ್ಷೇತ್ರದಲ್ಲಿ ಉಚಿತ ತಪಾಸಣೆ ಶಿಬಿರ ನಡೆಸುವುದು ನಮ್ಮ ಪುಣ್ಯ ಎಂದು ಡಾ. ಬಸವರಾಜಪ್ಪ ಹೇಳಿದರು. ಸೋಮವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠದ ಆವರಣದಲ್ಲಿ ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಮಲ್ಟ್ರಿ ಸ್ಪೆಷಾಲಿಟಿ ಆಸ್ಪತ್ರೆ ಚಳ್ಳಕೆರೆ ಹಾಗೂ ಆಯುಷ್ ಇಲಾಖೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು ಈ ಪುಣ್ಯಕ್ಷೇತ್ರದಲ್ಲಿ ಬಹಳ ವರ್ಷಗಳಿಂದ ಉಚಿತ ತಪಾಸಣೆ ಶಿಬಿರ ನಡೆಸಲಾಗುತ್ತದೆ ಆದ್ದರಿಂದ ಪಟ್ಟಣ ಹಾಗೂ ಹೋಬಳಿಯ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.