ಕಮಲಾಪುರ: ಇನ್ಮುಂದೆ ಮತ್ತಷ್ಟು ನಿಖರ ವಿದ್ಯುತ್ ಬಿಲ್ ವ್ಯವಸ್ಥೆ, ಕಮಲಾಪುರದಲ್ಲಿ ಬ್ಲೂಟೂತ್ ಮೂಲಕ ವಿದ್ಯುತ್ ಬಿಲ್ ಪ್ರಯೋಗಾತ್ಮಕ ಚಾಲನೆ
ವಿದ್ಯುತ್ ಸರಬರಾಜು ಕಂಪನಿಯಿಂದ ಗ್ರಾಹಕರಿಗೆ ಮತ್ತಷ್ಟು ನಿಖರ ಬಿಲ್ ನೀಡುವ ಉದ್ದೇಶದಿಂದ ಕಮಲಾಪುರ ಪಟ್ಟಣದಲ್ಲಿ ಬ್ಲೂಟೂತ್ ತಂತ್ರಜ್ಞಾನದ ಆಧಾರಿತ ಬಿಲ್ಲಿಂಗ್ ವ್ಯವಸ್ಥೆಗೆ ಪ್ರಯೋಗಾತ್ಮಕ ಚಾಲನೆ ನೀಡಲಾಗಿದೆ. ಮೀಟರ್‌ನಿಂದ ನೇರವಾಗಿ ಪ್ರಿಂಟರ್‌ಗೆ ಬಿಲ್ ಜನರೇಟ್ ಆಗುವ ಈ ವಿಧಾನದಿಂದ ಬಿಲ್ಲುಗಳಲ್ಲಿನ ದೋಷ ತಪ್ಪಿ, ಗ್ರಾಹಕರಿಗೂ ಮತ್ತು ಕಂಪನಿಗೂ ನಷ್ಟವಿಲ್ಲದ ವ್ಯವಸ್ಥೆ ಸಾಧ್ಯವಾಗಲಿದೆ. ಶನಿವಾರ ಬೆಳಗ್ಗೆ ಒಂಬತ್ತು ಗಂಟೆಯಿಂದ ಪ್ರಾಯೋಗಿಕವಾಗಿ ವಿದ್ಯುತ್ ಸರಬರಾಜು ಕಮಲಾಪುರ ಉಪ ವಿಭಾಗದ ಸಿಬ್ಬಂದಿ ವಿದ್ಯುತ್ ಸರಬರಾಜು ಕಂಪನಿಯ ಲೆಕ್ಕಾಧಿಕಾರಿ ಹನುಮಂತ ಅವರ ನೇತೃತ್ವದಲ್ಲಿ ನೂತನ ಬಿಲ್ಲಿಂಗ್ ವ್ಯವಸ್ಥೆಗೆ ಪ್ರಯೋಗ ಆತ್ಮಕ ಚಾಲನೆ ನೀಡಿದರು.