ನ್ಯಾಮತಿ: ನ್ಯಾಮತಿಯಲ್ಲಿ ಬೃಹತ್ ತಿರಂಗ ಯಾತ್ರೆ: ಮಳೆಯಲ್ಲೂ ನುಗ್ಗದ ಜನರ ದೇಶ ಪ್ರೇಮ
ನ್ಯಾಮತಿಯಲ್ಲಿ ಬೃಹತ್ ತಿರಂಗ ಯಾತ್ರೆ: ಮಳೆಯಲ್ಲೂ ನುಗ್ಗದ ಜನರ ದೇಶ ಪ್ರೇಮ ಉಗ್ರರ ನಿರ್ನಾಮಕ್ಕೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಯಶಸ್ವಿಯ ಹಿನ್ನೆಲೆಯಲ್ಲಿ ವೀರ ಯೋಧರ ಶೌರ್ಯರನ್ನು ಸಾರುವ ಸಲುವಾಗಿ ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ತಿರಂಗ ಯಾತ್ರೆಯನ್ನು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು. ಹೊನ್ನಾಳಿ ನ್ಯಾಮತಿ ಅವಳಿ ಪಟ್ಟಣ ನಿವಾಸಿಗಳಿಂದ ಹಮ್ಮಿಕೊಂಡಿದ್ದ ತಿರಂಗ ಯಾತ್ರೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿ ಬೃಹತ್ ತ್ರಿವರ್ಣ ಧ್ವಜವನ್ನು ಹಿಡಿದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದರು. ಜೋರು ಮಳೆ ಬಂದರೂ ತಿರಂಗ ಯಾತ್ರೆಯನ್ನು ನಿಲ್ಲಿಸದೆ ಸಾಗಿ ದೇಶ ಪ್ರೇಮ ಮೆರದದ್ದು ವಿಶೇಷವಾಗಿತ್ತು. ಯಾತ್ರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಇದ್ದರು.